Mahila Samman Yojana in Kannada (ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ 2023) | Complete Details, Sailient Features of MSSC in Kannada Video - Postalstudy | Post Office Blog | Materials for | Exams

2000+ Self Made Questions and Answers have been prepared and posted so for in this site to motivate Postal LDC Exams Aspirants in the form of Quizzes(800+ Questions)/MCQs(900+ Questions)/Matches(400+ Questions)/Can be find in TAG Section.

Header Ads

India Post

Mahila Samman Yojana in Kannada (ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ 2023) | Complete Details, Sailient Features of MSSC in Kannada Video

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ 2023 (Post Office Mahila Samman Savings Certificate (MSSC) 2023 ) Complete Details in Kannada Video.

ಈ ಯೋಜನೆಯಡಿಯಲ್ಲಿ ಹೆಣ್ಣು ಮಕ್ಕಳು ಅಥವಾ ಮಹಿಳೆಯರು ಖಾತೆಯನ್ನು ತೆರೆಯಬಹುದು.

ಖಾತೆಯ ಪ್ರಕಾರ:


1) ಈ ಯೋಜನೆಯಡಿಯಲ್ಲಿ ಹೆಣ್ಣು ಮಕ್ಕಳು ಅಥವಾ ಮಹಿಳೆಯರು ಖಾತೆಯನ್ನು ತೆರೆಯಬಹುದು


2) ಒಬ್ಬ ಮಹಿಳೆ ತನ್ನ ಹೆಸರಿನಲ್ಲಿ ಅಥವಾ ಅಪ್ರಾಪ್ತ ಬಾಲಕಿಯ ಪರವಾಗಿ ಗಾರ್ಡಿಯನ್ ರವರು ದಿನಾಂಕ 01.04.2023 ರಿಂದ 31.03.2025 ರ ವರೆಗೆ ಈ ಖಾತೆಯನ್ನು ತೆರೆಯಬಹುದು.


3) ಈ ಯೋಜನೆಯು ದೇಶದಾದ್ಯಂತ ಎಲ್ಲಾ ಅಂಚೆ ಕಛೇರಿಗಳಲ್ಲಿ ಲಭ್ಯವಿರುತ್ತದೆ.

ಠೇವಣಿಗಳು(Deposit):


1) ಕನಿಷ್ಠ ಠೇವಣಿ ರೂ 1000/-. ರೂ 100/- ರ ಗುಣಕಗಳಲ್ಲಿ ಯಾವುದೇ ಮೊತ್ತವನ್ನು ಖಾತೆಯಲ್ಲಿ ಠೇವಣಿ ಮಾಡಬಹುದು. ಗರಿಷ್ಠ ಠೇವಣಿ ಮಿತಿ ರೂ 2 ಲಕ್ಷ. ಅದರ ನಂತರ ಆ ಖಾತೆಯಲ್ಲಿ ಯಾವುದೇ ನಂತರದ ಠೇವಣಿಯನ್ನು ಅನುಮತಿಸಲಾಗುವುದಿಲ್ಲ 2) ರೂ. 2 ಲಕ್ಷ ಗರಿಷ್ಠ ಮಿತಿ ಒಳಗೆ ಒಬ್ಬರು ಈ ಯೋಜನೆಯಲ್ಲಿ ಎಷ್ಟು ಖಾತೆಗಳನ್ನಾದರೂ ತೆರೆಯಬಹುದು. 3) ಅಸ್ತಿತ್ವದಲ್ಲಿರುವ ಖಾತೆ ಹಾಗು ಇನ್ನೊಂದು ಖಾತೆಯನ್ನು ತೆರೆಯುವ ನಡುವೆ ಮೂರು ತಿಂಗಳ ಸಮಯದ ಅಂತರ ಇರಬೇಕು.

ಬಡ್ಡಿಗಳು (Interest)

ಈ ಯೋಜನೆಯಡಿಯಲ್ಲಿ ಠೇವಣಿಗಳಗೆ ಅನ್ವಯವಾಗುವ ಬಡ್ಡಿ ದರವು ಪ್ರಸ್ತುತ ವರ್ಷಕ್ಕೆ 7.5 ಪ್ರತಿಶತ ಆಗಿರುತ್ತದೆ. ಬಡ್ಡಿಯನ್ನು ತ್ರೈಮಾಸಿಕ ಆಧಾರದ ಮೇಲೆ ನೀಡಲಾಗುತ್ತದೆ ಮತ್ತು ಖಾತೆಗೆ ಜಮಾ ಮಾಡಲಾಗುತ್ತದೆ.

ಮೆಕ್ಯೂರಿಟಿಯ ಬಗ್ಗೆ ಮಾಹಿತಿ


ಈ ಠೇವಣಿಯು ತೆರೆದ ದಿನಾಂಕದಿಂದ ಎರಡು ವರ್ಷಗಳು ಪೂರ್ಣಗೊಂಡ ನಂತರ ಪಕ್ವವಾಗುತ್ತದೆ.


ಖಾತೆಯಿಂದ ಹಣ ಹಿಂತೆಗೆದುಕೊಳ್ಳುವಿಕೆ:


ಖಾತೆದಾರರು ಖಾತೆಯನ್ನು ತೆರೆದ ದಿನಾಂಕದಿಂದ ಒಂದು ವರ್ಷದ ಅವಧಿ ಮುಗಿದ ನಂತರ ಅದರೆ ಖಾತೆಯ ಮುಕ್ತಾಯದ ಮೊದಲು ಅರ್ಹ ಬ್ಯಾಲೆನ್ಸ್ನ ಗರಿಷ್ಠ ನಲವತ್ತು ಪ್ರತಿಶತದವರೆಗೆ ಒಂದು ಬಾರಿ ಹಿಂಪಡೆಯಲು ಅರ್ಹರಾಗಿರುತ್ತಾರೆ.

ಖಾತೆಯನ್ನು ಪಕ್ವತೆಗೆ ಮುಂಚೆ ಮುಚ್ಚುವಿಕೆ:


1) ಈ ಕೆಳಗಿನ ಸಂದರ್ಭಗಳಲ್ಲಿ ಖಾತೆಯನ್ನು ಮುಕ್ತಾಯದ ಮೊದಲು ಮುಚ್ಚಬಹುದು, ಅವುಗಳೆಂದರೆ: -


1) ಖಾತೆದಾರರ ಮರಣದ ನಂತರ;


i) ಖಾತೆದಾರರ ಮಾರಣಾಂತಿಕ ಕಾಯಿಲೆಗಳ ಸಂದರ್ಭದಲ್ಲಿ ವೈದ್ಯಕೀಯ ನೆರವಿಗಾಗಿ


ii) ಗಾರ್ಡಿಯನ್ ಮರಣದಂತಹ ತೀವ್ರ ಸಹಾನುಭೂತಿಯ ಸಂದರ್ಭಗಳಲ್ಲಿ, ಖಾತೆಯ ಕಾರ್ಯಾಚರಣೆ ಅಥವಾ ಮುಂದುವರಿಕೆಯು ಸಾಧ್ಯವಿಲ್ಲದಿದ್ದರೆ ಖಾತೆಯನ್ನು ಅಕಾಶಕವಾಗಿ ಮುಚ್ಚಬಹುದು.

ಖಾತೆಯನ್ನು ಪಕ್ವತೆಗೆ ಮುಂಚೆ ಮುಚ್ಚುವಿಕೆ:


(2) ಖಾತೆಯನ್ನು ಅಕಾಲಿಕವಾಗಿ ಈ ಮೇಲಿನ ಕಾರಣಕ್ಕಾಗಿ ಮುಚ್ಚಿದರೆ, ಅಸಲು ಮೊತ್ತದ ಮೇಲಿನ ಬಡ್ಡಿಯನ್ನು ಈ ಯೋಜನೆಗೆ ಅನ್ವಯಿಸುವ ದರದಲ್ಲಿ ಪಾವತಿಸಲಾಗುವುದು.


ಈ ಮೇಲಿನ ಕಾರಣ ಹೊರತುಪಡಿಸಿ ಬೇರೆ ಯಾವುದೇ ಕಾರಣಕ್ಕಾಗಿ ಖಾತೆಯನ್ನು ತೆರೆದ ದಿನಾಂಕದಿಂದ ಆರು ತಿಂಗಳ ಪೂರ್ಣಗೊಂಡ ನಂತರ ಯಾವುದೇ ಸಮಯದಲ್ಲಿ ಖಾತೆಯನ್ನು ಅಕಾಲಕವಾಗಿ ಮುಚ್ಚಬಹುದು. ಆ ಸಂದರ್ಭದಲ್ಲಿ ಈ ಯೋಜನೆಯಲ್ಲಿ ನಿರ್ದಿಷ್ಟಪಡಿಸಿದ ಬಡ್ಡಿ ದರಕ್ಕಿಂತ ಶೇಕಡಾ ಎರಡರಷ್ಟು ಕಡಿತಗೊಆಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ವೀಕ್ಷಿಸಿ:


Click here to Join Telegram Channel