Bhagyalakshmi SSA Scheme | Bhagyalakshmi SSA Scheme Accounts Regularization Procedure | Sukanya Samriddi Account (SSA)
Bhagyalakshmi SSA Account Operations. ಭಾಗ್ಯಲಕ್ಷ್ಮಿ ಯೋಜನೆಯಡಿಯಲ್ಲಿ ತೆರೆದ ಸುಕನ್ಯಾ ಸಮೃದ್ಧಿ ಖಾತೆಯ ಬಗ್ಗೆ.
ಭಾಗ್ಯಲಕ್ಷ್ಮಿ ಯೋಜನೆಯ ಫಲಾನುಭವಿಗಳು, ಮೊದಲೇ ವೈಯಕ್ತಿಕ ಸುಕನ್ಯಾ ಸಮೃದ್ಧಿ ಖಾತೆಯನ್ನು ಅಂಚೆ ಕಚೇರಿಯಲ್ಲಿ ಹೊಂದಿದ್ದು, ಆ ನಂತರ ಭಾಗ್ಯಲಕ್ಷ್ಮಿಯೋಜನೆಯಡಿಯಲ್ಲಿ ಸುಕನ್ಯಾ ಸಮೃದ್ಧಿ ಖಾತೆ ತೆರೆದಿದ್ದರೇ, ವೈಯಕ್ತಿಕ ಖಾತೆ regular açcount ಆಗಿರುತ್ತದೆ. ಭಾಗ್ಯಲಕ್ಷ್ಮಿ ಯೋಜನೆಯ ಖಾತೆ Irregular account ಆಗಿರುತ್ತದೆ.
ಈ ಸಂದರ್ಭದಲ್ಲಿ
1.regular ಖಾತೆಯನ್ನು ಬೆಂಗಳೂರು GPO ಗೆ ವರ್ಗಾವಣೆ ಮಾಡಲು transfer application ಭರ್ತಿ ಮಾಡಿ, transfer fee Rs. 118/- ತೆಗೆದುಕೊಂಡು, finacle ನಲ್ಲಿ entry ಮಾಡಿ TRAN ID ಯನ್ನು transfer application ಮೇಲೆ ಬರೆದು, ಫಲಾನುಭವಿಗಳಿಗೆ ಹಿಂದುರುಗಿಸಬೇಕು, ವರ್ಗಾವಣೆ ಮಾಡಬಾರದು.
2. Irregular ಖಾತೆಯಾದ ಭಾಗ್ಯಲಕ್ಷ್ಮಿ ಯೋಜನೆಯ SSA ಯನ್ನು ಮುಕ್ತಾಯಗೊಳಿಸಲು ಮನವಿ ಪತ್ರ ಫಲಾನುಭವಿಗಳಿಂದ ಬರೆಯಿಸಿ, ಮನವಿ ಪತ್ರ ಮತ್ತು ವರ್ಗಾವಣೆ ಅರ್ಜಿ,ಎರೆಡನ್ನು ಫಲಾನುಭವಿಗಳೇ ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮುಖಾಂತರ ಬೆಂಗಳೂರು GPO ಗೆ ಕಳಿಸಬೇಕು. GPO ದಲ್ಲಿ ವೈಯಕ್ತಿಕ regular ಖಾತೆಯನ್ನು ವರ್ಗಾವಣೆ ಮಾಡಿಕೊಂಡು, irregular ಖಾತೆಯಾದ ಭಾಗ್ಯಲಕ್ಷ್ಮಿ ಯೋಜನೆಯ ಖಾತೆಯನ್ನು ಮುಕ್ತಾಯಗೊಳಿಸಿ ಆ ಖಾತೆಯಲ್ಲಿದ್ದ ಹಣವನ್ನು, ವೈಯಕ್ತಿಕ ಖಾತೆಗೆ (regular ಖಾತೆ ) ವರ್ಗಾಯಿಸುತ್ತಾರೆ.
ಒಂದು ವೇಳೇ, ಭಾಗ್ಯಲಕ್ಷ್ಮಿ ಯೋಜನೆ ಖಾತೆ ತೆರೆದ ಮೇಲೆ, ವೈಯಕ್ತಿಕ ಖಾತೆ ತೆರೆದಿದ್ದರೇ, ಭಾಗ್ಯಲಕ್ಷ್ಮಿ ಸುಕನ್ಯಾ ಸಮೃದ್ಧಿ ಖಾತೆ regular account ಆಗಿದ್ದು, irregular ಆದ ವೈಯಕ್ತಿಕ ಖಾತೆಯನ್ನು ಸಂಭಂದಪಟ್ಟ ಅಂಚೆ ಕಚೇರಿಯಲ್ಲೆ ಮುಕ್ತಾಯಗೊಳಿಸಿ, ಆ ಖಾತೆಯ ಹಣವನ್ನು regular ಖಾತೆಯಾದ ಭಾಗ್ಯಲಕ್ಷ್ಮಿ ಯೋಜನೆಯ ಖಾತೆಗೆ ವರ್ಗಾಯಿಸಬೇಕು.ಇದರ ಬಗ್ಗೆ ಏನಾದರೂ ಗೊಂದಲಗಳಿದ್ದಲ್ಲಿ GPO ನ್ನು ಸಂಪರ್ಕಿಸತಕ್ಕದ್ದು
080-22850070
9845892785